Saturday, June 23, 2007
ನಾನು ಏಲ್ಲರ ಹಾಗೇ ಭಾರತ ಕ್ರಿಕೇಟನ ಹುಚ್ಚು ಅಭಿಮಾನಿ. ತಮ್ಮ ನೆಚ್ಚಿನ ದೇಶ ಗೆಲ್ಲಲಿ ಎಂದು ಹಾರೈಸಿ ಹೋಮಗಳನ್ನು ಮಾಡುವ ಹುಚ್ಚು ಅಭಿಮಾನಿಗಳನ್ನು ಕಂಡಿದ್ದೆ. ಆದೇನೊ ನನ್ನ ದುರಾದ್ರುಸ್ಟವೋ, ಬೇರೆ ದೇಶದ ಉತ್ತಮ ಅಟವೋ ಅಥವಾ ನಮ್ಮ ದೇಶದ ಆಟಗಾರರ ಕಳಪೆ ಆಟವೋ, ನಾನು ದೂರದರ್ಶನ ಮೂಲಕ ಕ್ರಿಕೇಟ ನೋಡಿದಾಗಲೆಲ್ಲಾ ಭಾರತ ಸೋಲುತ್ತಿತ್ತು. ಇದು ಎಸ್ಟೊಂದು ಸಾರಿ ನಿದರ್ಶನವಾಯಿತೆಂದರೆ ಭಾರತದ ಸೋಲಿಗೆ ನಾನು ದೂರದರ್ಶನ ನೋಡಿದ್ದೆ ಕಾರಣ ಎನ್ನುವ ಮಟ್ಟಿಗೆ ನನ್ನ ಗೆಳೆಯರು ನಂಬಲಾರಂಬಿಸಿದರು. ೨೦೦೭ ವಿಶ್ವಕಪ್ ಕ್ರಿಕೇಟನ ಮೊದಲನೆ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ದ ಭಾರತ ಹೀನಾಯವಾಗಿ ಸೋತಾಗ ಕೂಡ ನಾನು ದೂರದರ್ಶನ್ ನೋಡುತ್ತಿದ್ದೆ. ಇದು ನನ್ನ ಮೇಲೆ ಇಸ್ಟೊಂದು ಪರಿಣಾಮ ಬೀರಿತೆಂದರೆ ಭಾರತದ ಸೋಲಿಗೆ ನಾನೇ ಕಾರಣ ಎಂದು ನಾನೇ ನಂಬಲಾರಂಬಿಸಿದೆ. ಶ್ರೀಲಂಕಾ ವಿರುದ್ದ ಮುಂದಿನ ಪಂದ್ಯ ಭಾರತದ ಪಾಲಿಗೆ �ಮಾಡು ಇಲ್ಲವೆ ಮಡಿ� ಎಂಬ ಪರಿಸ್ತಿತಿ ತಂದೋಡ್ಡಿತ್ತು. ಆ ಪಂದ್ಯ ಸೋತರೆ ಭಾರತ ವಿಶ್ವಕಪ್ ಪಂದ್ಯಾವಳಿಯಿಂದ ಹೋರಗುಳಿಯಬೇಕಾಗಿತ್ತು. ಆದು ಮರ್ಚ್ ೨೩ ಶುಕ್ರವಾರ, ಭಾರತ ಹಾಗು ಶ್ರೀಲಂಕಾ ಪಂದ್ಯ. ಎಲ್ಲರ ಹಾಗೇ ಭಾರತ ಗೆಲ್ಲಲಿ ಎಂಬ ಬಯಕೆ ನನ್ನದು ಕೂಡ. ನಾನು ಮ್ಯಾಚ್ ನೋಡಿದರೆ ಎಲ್ಲಿ ಭಾರತ ಸೋಲುತ್ತದೋ ಎಂಬ ಭಯಂದಿದ ನನ್ನ ಗೆಳೆಯರೆಲ್ಲಾ ಸೇರಿ ನನ್ನನ್ನಾ �ದುನಿಯಾ� ಚಲನಚಿತ್ರ ನೋಡಿಲಿಕ್ಕೆ ಬೆಂಗಳೂರಿನ ಮೇಜೆಸ್ಟಿಕ್ ಚಿತ್ರಮಂದಿರಕ್ಕೆ ಕಳುಹಿಸಿದರು (ಎಂಥಾ ಒಳ್ಳೇ ಫ಼್ರೇಂಡ್ಸ ಅಲ್ಲವಾ?). ಪ್ರತಿಯೊಂದು ನೀಮಿಷಾ ಕಳೆದ ಹಾಗೆ ಪಂದ್ಯ ಎನಾಯಿತು ಎಂಬ ಕುತೂಹಲ. ಕುತೂಹಲ ತಡೆಯಲಾರದೆ ಎಲ್ಲಿ ಸ್ಕೋರ್ ಕೇಳ್ತಿನೋ ಎಂಬ ಭಯದಿಂದ ಮೋಬೈಲ್ ಸ್ವಿಚ್ ಅಫ಼್ಫ಼್ ಮಾಡಿದ್ದೆ. ಚಲನಚಿತ್ರ ಮುಗಿದಾಗ್ ರಾತ್ರಿ ೧೦:೩೦ ಘಂಟೆ. ಶ್ರಿಲಂಕಾ ತನ್ನ ಬ್ಯಾಟಿಂಗ ಸರದಿ ಮುಗಿಸಿತ್ತು. ಹೆದರುತ್ತಲೆ ಸ್ಕೋರ್ ಕೆಲಿದೆ. ಶ್ರೀಲಂಕಾ ನಿಗದಿತ ೫೦ ಒವರಗಳಲ್ಲಿ ೨೫೪ ರನ್ ಗಳಿಸಿತ್ತು. ಭಾರತದ ಬ್ಯಾಟಿಂಗನ ಭಲ ನೋಡಿದಾಗ ಗೆಲ್ಲುತ್ತೆ ಎಂಬ ಭರವಶೆ ಇಂದಾ ಕುಣಿದಾಡಿದೆ. ಕೆಲವೇ ಕ್ಷಣಗಳಲ್ಲಿ ಭಾರತದ ಬ್ಯಾಟ್ಟಿಂಗ ಶುರುವಾಯಿತು. ನಾನು ಮಾತ್ರ ನಮ್ಮ ಮನೆಗೆ ಹೋಗದೆ ಮನೆಯ ಮುಂದೆ ಇರುವ ಗಾರ್ಡನ್ನಲ್ಲಿ ಉಗುರ ಕಡಿಯುತ್ತಾ ಕುಳಿತೆ. ಸ್ವಲ್ಪ ಸಮಯದ ನಂತರ ಕುತೂಹಲ ತಡೆಯಲಾರದೆ ಮನೆಯ ಒಳಗೆ ಹೋದೆ. ನಾನು ಮನೆಯೊಳಗೆ ಹೋದಿದ್ದೆ ತಡ ನಮ್ಮ ಉತ್ತಪ್ಪ ಸರ್ ಚಮಿಂದಾ ವಾಸಗೆ ರಿಟರ್ನ್ ಕ್ಯಾಚ್ ಕೊಟ್ಟು ಮನೆಯ ಹಾದಿ ಹಿಡಿದರು. ಮತ್ತೆ ನನ್ನನು ನಾನೇ ಶಪಿಸುತ್ತಾ ಮರಿಳಿ ಗಾರ್ಡನ್ನಿಗೆ ಬಂದು ಕುಳಿತೆ. ಇನ್ನು ಸ್ವಲ್ಪ ಹೊತ್ತು ಕುಳಿತರೆ ಉಗುರು ಕಡಿದು ಎಲ್ಲಿ ನನ್ನ ಬೆರೆಳು ಹೋಗತ್ತೋ ಎಂಬ ಭಯದಿಂದಾ ಮತ್ತೆ ಮನೆಯೊಳಗೆ ಹೋದೆ. ನಾನು ಮನೆಯೊಳಗೆ ಮತ್ತೆ ಹೋದಿದ್ದೆ ತಡ ಗಂಗುಲಿ ಸರ್ ಮುರಲೀಧರನ ಗೆ ಕ್ಯಾಚ್ ಕೊಟ್ಟು ಮನೆಯ ಹಾದಿ ಹಿಡಿದರು. ಇಷ್ಟೆ ಸಾಕು ನನ್ನನ್ನು ತಿನ್ನುವ ಹಾಗೆ ನೋಡುತ್ತಿದ್ದ ಎಲ್ಲ ಗೆಳೆಯರನ್ನು ನೊಡಿ ಹೆದರಿ ಮತ್ತೆ ಮರಿಳಿ ಗಾರ್ಡನ್ನಿಗೆ ಬಂದು ಕುಳಿತೆ. ಕುತೂಹಲ ತಡೆಯಲಾಗಲಿಲ್ಲ. ಎಷ್ಟಾದರು ನಾನು ಕ್ರಿಕೇಟನ ಹುಚ್ಚು ಅಭಿಮಾನಿಮನಿ ತಾನೇ. ಮತ್ತೆ ಮನೆಯೊಳಗೆ ಎಂಟ್ತ್ರಿ ಹೊಡೆದೆ. ದುರಾದ್ರುಸ್ಟವನ್ನು ನಂಬದವರು ಕೂಡ ನನ್ನನ್ನು ನೋಡಿ ನಂಬುವ ಹಾಗಾಯಿತು. ನಾನು ಮನೆಗೆ ಹೊದ ತಕ್ಷಣ ನಮ್ಮ ತೆಂಡುಲ್ಕರ್ ಸರ್ ಗೆ ಗೊತ್ತಾಯಿತು ಅನಿಶುತ್ತೆ ನಾನು ಬಂದಿದಿನಿ ಅಂಥಾ ...ಫ಼ರ್ನಾಂಡೊ ಬಾಲಿಂಗನಲ್ಲಿ ರನ್ ಗಳಿಸದೆ ಬೊಲ್ಡ್ ಆಗಿ ಮನೆ ದಾರಿ ಹಿಡದೆಬಿಟ್ಟರು. ತೆಂಡುಲ್ಕರ್ ಔಟ್ ಆಗಿ ಎರಡು ನಿಮಿಷಾನು ಆಗಿರಲಿಲ್ಲ ಅನಿಶುತ್ತೆ..ನಮ್ಮ ರೂಮಿಗೆ ಪೋನಗಳ ಸುರಿಮಳೆ...ಎಲ್ಲರದು ಒಂದೇ ಪ್ರಶ್ನೆ �ದಾಮೋದರ ಸರ್ ಟಿವಿ ನೊಡ್ತಾ ಇಧರಾ?� ಎಷ್ಟೊಂದು ರಿಸ್ಪೆಕ್ಟ್ ನೋಡಿ. ಹೌದು ಅನ್ನೋದೆ ತಡ �ನಂಗೋತ್ತಿತ್ತು ಅವನು ಭಾರತಕ್ಕೆ ದೊಡ್ಡ ಶನಿ ಅಂಥಾ� ಎಂಬ ಹೊಗಳಿಕೆ ಮಾತು. ಸಂಕಟ್ ತಡಿಯಲಾರದೆ ಊಟ ಮಾಡದೆ ಮಲಗಿ ಬಿಟ್ಟೆ. ಬೆಳಿಗ್ಗೆ ಎದ್ದ ತಕ್ಷಣ ಇತಿಹಾಸ್ ಬರೆದದ್ದಾಗಿತ್ತು. ಇಷ್ಟೆಲ್ಲಾ ಓದಿದ ನೀವು ಇಗ ಹೇಳಿ : �ಭಾರತದ ಸೋಲಿಗೆ ಯಾರು ಕಾರಣ ಅಂಥಾ?�. ನನಗೆ ಗೊತ್ತು ನೀವು ಕೂಡ ಅದನ್ನೆ ಹೇಳಿತಿರಾ....�ದಾಮೋದರ ದಯವಿಟ್ಟು ನೀವು ಇನ್ನ ಇಂಡಿಯಾ ಮ್ಯಾಚ್ ಇದ್ದಗಾ ಟಿವಿ ನೋಡಬೇಡಿ ಅಂಥಾ� ...ಹೌದಲ್ವ????
Subscribe to:
Post Comments (Atom)
1 comment:
Lovely be. Tumba chennagi bardidiya :) The person who dropped Mr.Damodar till majestic theatre was me :) One more incident he forgot to mention, since wickets were falling whenever Damu came to watch the TV, he got frustrated and slept in other room, and he got up after sometime to drink water, and saw us still watching TV, as soon as he came to ask the score, "Dhoni" got out. :)) Such a lucky person he is for India. And its proven.
Post a Comment